ದೃಷ್ಟಿ(Vision)

=>ಮಾಧ್ವ ತತ್ತ್ವವನ್ನು ಬೋಧಿಸುವುದು ಮತ್ತು ಉಪನ್ಯಾಸ ಮೊದಲಾದುವುಗಳ ಮೂಲಕ ಪ್ರಚಾರ ಮಾಡಿಸುವುದು.

=>ಜ್ಯೌತಿಷ , ಅಲಂಕಾರ ಮೊದಲಾದ ಶಾಸ್ತ್ರಗಳನ್ನು ಸಂರಕ್ಷಿಸುವುದು.

=>ದ್ವೈತ ಮೊದಲಾದ ಶಾಸ್ತ್ರಗಳಿಗೆ ಸಂಬಂಧಿಸಿದ ತಾಡಪತ್ರ, ಹಸ್ತಪ್ರತಿ, ಪ್ರಾಚೀನ ಗ್ರಂಥಗಳನ್ನು ಮತ್ತು ಆಧುನಿಕ ಗ್ರಂಥ, ಪ್ರಬಂಧ ಮೊದಲಾದುವುಗಳಗಳನ್ನು ಸಂಗೃಹಿಸುವುದು ಮತ್ತು ಸಂರಕ್ಷಿಸುವುದು, ಪ್ರಕಾಶಗೊಳಿಸುವುದು.

=>ಸಮಾಜದಲ್ಲಿ ಸಂಸ್ಕೃತ ಕಲಿಕೆಯನ್ನು ಉತ್ತೇಜಿಸುವುದು. ವೇದ, ಉಪನಿಷತ್ತು ಮತ್ತು ಇತರ ಶಾಸ್ತ್ರಗಳಲ್ಲಿ ಅಧ್ಯಯನಾಭಿರುಚಿಯನ್ನು ಬೆಳೆಸುವುದು.

ಧ್ಯೇಯ (Mission)

=>ಸಂಸ್ಕೃತ ಬೋಧನೆಯನ್ನು ವ್ಯವಸ್ಥೆಗೊಳಿಸುವುದು.

=>ಭಾರತೀಯ ಸಂಸ್ಕೃತಿಗೆ ಪೂರಕವಾದ ಸಂಗೀತ, ನಾಟ್ಯ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸುವುದು.

=>ವಿದ್ಯಾರ್ಥಿಗಳಿಗೆ ನೈತಿಕತೆಯ ಮೌಲ್ಯಗಳ ಬಗ್ಗೆ ತರಬೇತಿ ನೀಡುವುದು.

=>ಸಂಸ್ಕೃತ ಸಾಹಿತ್ಯ ಮತ್ತು ತತ್ತ್ವಶಾಸ್ತ್ರದಿಂದ ಪ್ರೇರಿತವಾದ ಮೌಲ್ಯಗಳ ಮೂಲಕ ಆಧುನಿಕ ಸಮಾಜವನ್ನು ನಿರ್ಮಿಸುವುದು.

ಏಕೆ SMSP ಆಯ್ಕೆ?

ಈ ಕಾಲೇಜು ನೀಡುವ ಸೇವೆಗಳು ಮತ್ತು ಸೌಲಭ್ಯಗಳು ಕ್ರಮವಾಗಿ ಈ ಕೆಳಗಿನಂತಿವೆ .

ಉಚಿತ ಶಿಕ್ಷಣ

ಇಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಯಾವುದೇ ವಿಧವಾದ ಶಿಕ್ಷಣ ಶುಲ್ಕವಿಲ್ಲದೆ ಉಚಿತ ಶಿಕ್ಷಣವನ್ನು ನೀಡಲಾಗುತ್ತದೆ.

ಉಚಿತ ವಿದ್ಯಾರ್ಥಿನಿಲಯ

ಇಲ್ಲಿ ದೂರದಿಂದ ಬರುವ ವಿದ್ಯಾರ್ಥಿಗಳಿಗೆ ಎಲ್ಲಾ ಮೂಲಭೂತ ಸೌಲಭ್ಯಗಳೊನ್ನೊಳಗೊಂಡ ಉಚಿತ ಹಾಸ್ಟೆಲ್ ಸೌಲಭ್ಯವನ್ನು ಒದಗಿಸಲಾಗುತ್ತದೆ.

ಉಚಿತ ಭೋಜನ ವ್ಯವಸ್ಥೆ

ಇಲ್ಲಿ ಅಧ್ಯಯನ ಮಾಡುವ ಎಲ್ಲಾ ವಿದ್ಯಾರ್ಥಿಗಳಿಗೆ ಇಲ್ಲಿನ ಶ್ರೀಕೃಷ್ಣ ಮಠದ ಸಹಕಾರದಿಂದ ಉಚಿತವಾಗಿ ಭೋಜನ ವ್ಯವಸ್ಥೆ ಇದೆ.

ಉಚಿತ ಗ್ರಂಥಾಲಯ

ಕಾಲೇಜಿನಲ್ಲಿ ಬೃಹತ್ ಗ್ರಂಥಾಲಯವಿದ್ದು, ಸುಸಜ್ಜಿತ ಓದುವ ಕೋಣೆ ಸೌಲಭ್ಯವಿದೆ. ವೇದಾಂತ, ಜ್ಯೌತಿಷ, ಅಲಂಕಾರ ಮುಂತಾದ ವಿವಿಧ ವಿಷಯಗಳ ಬಗ್ಗೆ ೧೦,೩೦೦ ಕ್ಕೂ ಹೆಚ್ಚು ಸಂಖ್ಯೆಯ ಪುಸ್ತಕಗಳು ಲಭ್ಯವಿದೆ. ಸಾಕಷ್ಟು ಸಂಖ್ಯೆಯ ನಿಯತಕಾಲಿಕೆಗಳು ಮತ್ತು ಪತ್ರಿಕೆಗಳು ವಿದ್ಯಾರ್ಥಿಗಳಿಗೆ ಲಭ್ಯವಾಗಿವೆ.

ಉಚಿತ ಕಂಪ್ಯೂಟರ್ ಶಿಕ್ಷಣ

ಈ ಕಾಲೇಜಿನಲ್ಲಿ ಸುಸಜ್ಜಿತ ಕಂಪ್ಯೂಟರ್ ಲ್ಯಾಬ್ ಇದ್ದು ಅದರಲ್ಲಿ ೧೫ ಆಧುನಿಕ ಕಂಪ್ಯೂಟರ್ ಗಳು, ಮುದ್ರಕ, ಸ್ಕ್ಯಾನರ್ ಮೊದಲಾದ ವ್ಯವಸ್ಥೆ ಇದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ವೇಗದ ಇಂಟರ್ ನೆಟ್ ಸಂಪರ್ಕವನ್ನು ಕೂಡಾ ಒದಗಿಸಲಾಗಿದೆ.


ಶಿಕ್ಷಣವಿಷಯ (ಕೋರ್ಸ್)

ಸಾಹಿತ್ಯ

ಅವಧಿ : ೨ ವರ್ಷ

ಈ ತರಗತಿ PUC ಗೆ ಸಮಾನವಾಗಿದೆ.

ಶಾಸ್ತ್ರೀ

ಅವಧಿ : ೩ ವರ್ಷ

ಈ ಕೋರ್ಸ್ BA ಗೆ ಸಮಾನವಾಗಿದೆ

ಆಚಾರ್ಯ

ಅವಧಿ : ೨ ವರ್ಷ

ಈ ಕೋರ್ಸ್ MA ಗೆ ಸಮಾನವಾಗಿದೆ